Sunday, November 2, 2014

Monday, October 13, 2014

ಪಠ್ಯ - ರಂಗ - ಪ್ರದರ್ಶನದ ಲೋಗೋ


ಹೊಸಪೇಟೆಯ ಗೆಳೆಯರಾದ ವಾದಿರಾಜ್ ರವರು ರಚಿಸಿದ ಲೋಗೋ
ಪಠ್ಯ - ರಂಗ - ಪ್ರದರ್ಶನ

Sunday, October 12, 2014

ಮಕ್ಕಳ ಗಾಳಿಪಟ

ಏಕಾದಶಿಯ ದಿನ ಗಾಳಿಪಟ ಹಾರಿಸಿದ ನಮ್ಮ ಮಕ್ಕಳು    





ತಾಲೂಕು ಮಟ್ಟದ ಪ್ರತಿಭಾ ಕಾರಂಜಿ




Sunday, August 24, 2014

ಬಿಸಿಯೂಟ

            ಶಾಲಾ ತರಗತಿ ಕೋಣೆಗೆ ಸರ್ ಬಂದು ’ನಾಳೆಯಿಂದ ಬಿಸಿಯೂಟ ಇಲ್ಲ. ನೀವು ಬುತ್ತಿ ತರಬೇಕು ನೋಡಿ’ ಎಂದಾಕ್ಷಣ ಹಲವು ಮಕ್ಕಳ ಮುಖದಲ್ಲಿ ನಿರಾಸೆ ಸುಳಿದಾಡತೊಡಗಿತು. ಹಳ್ಳಿಯಲ್ಲಿ ಸಾಕಷ್ಟು ಸ್ಥಿತಿವಂತರಲ್ಲದ ಜನ, ಅವರ ಮಕ್ಕಳು ಶಾಲೆಗೆ ಹೋಗುವುದರಿಂದ ಒಂದೊಪ್ಪತ್ತಿನ ಊಟ ಹೊರಗಾಗುತ್ತಲ್ಲ ಎಂಬ ಆಲೋಚನೆಯಲ್ಲಿ ದುಡಿತದತ್ತ ಮನಸ್ಸು ಹರಿಸಿದ್ದಾರೆ. ಇಲ್ಲದೇ ಹೋಗಿದ್ದರೆ ಮಕ್ಕಳನ್ನು ದುಡಿಯಲಿಕ್ಕೆ ಕರೆದೊಯ್ಯುವ ಎಷ್ಟೋ ಪಾಲಕರು ನಮ್ಮ ಪ್ರತಿಯೊಂದ ಹಳ್ಳಿಯಲ್ಲಿ ಇದ್ದಾರೆ.  ಬಿಸಿಯೂಟ ಸರ್ಕಾರ ಮಕ್ಕಳಿಗಾಗಿ ನೀಡಿರುವ ಒಂದು ವಿಶೇಷ ಯೋಜನೆ ಎನ್ನಬಹುದು.
ಶಾಲೆಯಲ್ಲಿ ಇಂದು ಮಕ್ಕಳಿಗಾಗಿ ವಿದ್ಯಾಭ್ಯಾಸ ಮಾತ್ರವಲ್ಲ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್, ವಿದ್ಯಾರ್ಥಿ ವೇತನ, ಹಾಲು, ಮಾತ್ರೆ ಹೀಗೆ ಹಲವಾರು ಯೋಜನೆಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕೈಗೊಂಡಿದ್ದಾರೆ. ಬಿಸಿಯೂಟದಿಂದ ನಗರ ಪ್ರದೇಶಗಳ ಶಾಲೆಗಳಲ್ಲಿ ಎಷ್ಟು ಅನುಕೂಲಗಳಾಗಿದೆ ಎನ್ನುವುದನ್ನು ನಾನು ಪಕ್ಕಕ್ಕೆ ಇಟ್ಟು ನೋಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ಆಗಿರುವ ಅನುಕೂಲಗಳನ್ನು ನಾವಿಲ್ಲಿ ಪ್ರಾಧಾನವಾಗಿ ಕಾಣಬೇಕಾಗಿದೆ. 

 ಕಳೆದ ಒಂದು ವಾರದಿಂದ ನಮ್ಮ ಪ್ರೌಢಶಾಲೆಯಲ್ಲಿ ಮಾತ್ರವಲ್ಲ ತಾಲೂಕು ಹಾಗೂ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿತ್ತು. ಕಾರಣ ಈ ವರ್ಷದ ದಾಸ್ತನು ಸರಬರಾಜು ಮಾಡುವ ಲಾರಿಗಳ ಟೆಂಡರ್ ಆಗದೇ ಇರುವುದು. ಸರಕು ಇದೆ ಆದರೆ ಪೂರೈಕೆಯಲ್ಲಿ ಆದ ವ್ಯತ್ಯಾಸದಿಂದ ಇಡೀ ಮಕ್ಕಳ ಮುಖದಲ್ಲಿ ಚಿಂತೆಯ ಛಾಯೆ ಮೂಡಿಸುವುದರ ಜೊತೆಗೆ ಗೈರು ಹಾಜರಿಗೂ ಕಾರಣೀಕರ್ತರಾದರು. ತಂದೆ ತಾಯಿ ದುಡಿಯಲಿಕ್ಕೆ ಗೋವಾ, ಮಂಗಳೂರು, ಉಡುಪಿ, ಬೆಂಗಳೂರಿನಂಥಹ ಮಹಾನಗರಗಳಿಗೆ ಸಾಗಿ ಮಕ್ಕಳನ್ನು ಅವನ/ಳ ಚಿಕ್ಕಪ್ಪ, ಮಾವ ಅಥಾವ ಯಾರೋ ಸಂಬಂಧಿಗಳ ಮನೆಯಲ್ಲಿ ಬಿಟ್ಟು ಓದಿಕೊಂಡಿರಲಿ ಎಂದು ಸಾಗಿರುತ್ತಾರೆ. ಆದರೆ ಶಾಲೆಯಲ್ಲಿ ಊಟದ ಕೊರತೆಯಾಗಿ ನಾನು ಮನೆಗೆ ಹೋಗಿ ತಮ್ಮ ಪಾಲಕರಿಗೆ ಹೊರೆಯಾಗುವೇನಲ್ಲ ಎಂಬ ಆತಂಕ ಆ ಮಕ್ಕಳಲ್ಲಿ ಸುಳಿದಾಡುತ್ತಿರುತ್ತದೆ. ಒಂದು ಊಟ ಮಗುವಿನ ಮೇಲೆ ಬೀರುವ ಪರಿಣಾಮದ ಕುರಿತು ನಾವು ಯೋಚಿಸಬೇಕಾಗಿದೆ. ತಮ್ಮ ಸ್ಥಿತಿಯನ್ನು ಸರಿಪಡಿಸಿಕೊಳ್ಳಲಿಕ್ಕೆ ಮಕ್ಕಳು ಶಾಲೆಯನ್ನೇ ತಪ್ಪಿಸಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾರೆ. ಆ ಒಂದು ಊಟ ಅವನ ಮೇಲೆ ಆಗುವ ಪರಿಣಾಮದ ಕುರಿತು ಸಹಜವಾಗಿ ಯಾರು ಯೋಚಿಸುವುದಿಲ್ಲ. ಆದರೆ ಆ ಮಗು ಅದರ ಮನಸ್ಸಿನೊಳಗೆ ಆಗುವ ಗೊಂದಲಗಳು ಇಂದು ಶಾಲೆಯನ್ನು ತೊರೆಯುವಂತೆ ಮಾಡಿದರೆ, ನಾಳೆ ಅವನ ಭವಿಷ್ಯದ ನಿರ್ಣಯವನ್ನು ತೆಗೆದುಕೊಳ್ಳುವಾಗ ಬದಲಾಗುವ ಸ್ಥಿತಿಯನ್ನು ಊಹಿಸಬೇಕಾಗಿದೆ. 

                     ಬರಗಾಲ, ಮುಂಗಾರು ಮಳೆಯ ಕೊರತೆ, ಬೆಲೆ ಏರಿಕೆ ಮನುಷ್ಯನನ್ನು ಸಹ್ಜವಾಗಿ ಬದುಕನ್ನು ನಡೆಸಲಿಕ್ಕಾಗಿ ಅರಸುತ್ತಾ ಸಾಗಬೇಕಾಗಿದೆ. ಬದುಕಿಗಾಗಿ ಗೂಳೇ ಹೋಗಲೇ ಬೇಕಾದ ಅನಿವಾರ್ಯ ಸ್ಥಿತಿ  ನಮ್ಮ ಹಳ್ಳಿಗರಿಗೆ ಇದೆ. ತಮ್ಮ ಮಕ್ಕಳ ಭವಿಷ್ಯದ ಚಿಂತನೆಯು ಇಲ್ಲಿ ಸೇರಿದೆ. ಆದರೆ ನಮ್ಮ ಎಲ್ಲ ಸೌಕರ್ಯದ ನಡುವೆ ನಮ್ಮ ಮಕ್ಕಳ ಮೇಲೆ ನಮಗಿರುವ ಕಾಳಜಿ ಏನು ? ಎಂದು ಆಲೋಚಿಸಬೇಕು. ಅತ್ಯಾಚಾರದಂಥಹ ಸುದ್ದಿಗಳು ಎಲ್ಲರಲ್ಲೂ ಭಯವನ್ನು ಹುಟ್ಟಿ ಹಾಕುತ್ತಿವೆ. ಮಾಧ್ಯಮಗಳ ತೀವ್ರತೆಯು ಮಕ್ಕಳ ಮನಸ್ಸನ್ನು ಘಾಸಿ ಮಾಡುವ ಬದಲು ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಿದೆ. ಮಗುವಿಗೆ ಇಂದು ಹಸಿವು ಇದೆ. ಅದು ಒಂದೊಪ್ಪತ್ತಿನದಾಗಿರಬಹುದು, ಕಲಿಕೆಯದಾಗಿರಬಹುದು ಆದರೆ ಅವನ/ಳ ಹಸಿವನ್ನು ನೀಗಿಸುವಂಥ, ಅವರ ಮನಸ್ಸನ್ನು ಅರಳಿಸುವಂಥ ಕಾರ್ಯಗಳನ್ನು ನಮ್ಮ ಅಧಿಕಾರಿಗಳು, ಶಿಕ್ಷಕರು ಹಾಗೂ ಪಾಲಕರು ಮಾಡಬೇಕಾಗಿದೆ. ಮಕ್ಕಳ ಇಂದಿನ ಈ ಹಸಿವುಗಳನ್ನು ಇಂಗಿಸುವ, ದೂರದಲ್ಲಿ ನಿಂತು ಇದೇ ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ತಂದೆ-ತಾಯಿಗಳಿಗೆ ಮಗನ ಶ್ರೇಯಸ್ಸನ್ನು ಕೇಳಿ ತಮ್ಮ ನೋವನ್ನು ಮರೆಯುವಂಥ ವಾತವರಣವನ್ನು ನಾವು ಕಟ್ಟಬೇಕಾಗಿದೆ. ಕಳೆದ ಸಾಲಿನಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ತನ್ನ ಬಿಡುವಿನ ವೇಳೆಯಲ್ಲಿ ಕೂಲಿ ಮಾಡಿಕೊಂಡು ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಹಣವನ್ನು ಸಂಗ್ರಹಿಸುತ್ತಿದ್ದ. ಹಾಗೆಯೇ ಅವನು ಇಡೀ ಶಾಲೆಗೆ ಹೆಚ್ಚಿನ ಅಂಕ ಪಡೆದು ಮೊದಲಿಗನಾದ. ನಮ್ಮ ಶಾಲೆಯ ಕನ್ನಡ ಅಧ್ಯಾಪಕರು ಅವನ ಓದುವಿಗೆ ಹಣದ ರೂಪದಲ್ಲಿ ಸಹಾಯ ಮಾಡಿದರು. ನಾನು ಕೆಲವು ಸಂಘ-ಸಂಸ್ಥೆಗಳೊಂದಿಗೆ ಮಾತನಾಡಿ ಅವನ ನೆರವಿಗೆ ಹಣದ ಹಾಗೂ ಪುಸ್ತಕದ ರೂಪದಲ್ಲಿ ಸಹಾಯ ಮಾಡಿದ್ದು ಇದೆ. ಒಂದೊಪ್ಪತ್ತಿನ ಊಟ ಅವನನ್ನು ಬಲಿ ತೆಗೆದುಕೊಳ್ಳದಿರಲಿ. ಈ ಊಟ ಕೇವಲ ಊಟವಾಗದೇ ಭವಿಷ್ಯತನ್ನು ರೂಪಿಸುವ ದಾರಿಯಾಗಲಿ.

Friday, August 15, 2014

ಆರು ಕೊಂಬಿನ ಆನೆ

    ಬೋದಿಸತ್ವನು  ಒಂದು  ಸಲ ವಾರಾಣಸಿಯ ರಾಜನ ಮಂತ್ರಿಗೆ ಮಗನಾಗಿ ಹುಟ್ಟಿದನು. ಚಿಕ್ಕಂದಿನಿಂದಲೇ ಅವನು ಬುದ್ದಿಶಾಲಿಯಾದ್ದರಿಂದ ಅವನಿಗೆ ಮೇದಾವಿ ಎಂದು ಹೆಸರಿಟ್ಟರು. ತಂದೆ ಕಾಲವಾದ ಮೇಲೆ ತನ್ನ ತಂದೆಯ  ಸ್ಥಾನಕ್ಕೆ ಮೇದಾವಿ ಮಂತ್ರಿಯಾದ.
        ವಾರಾಣಾಸಿಯ ರಾಜನ ಅರಮನೆಯಲ್ಲಿ ಒಂದು ಪಟ್ಟದ ಆನೆ ಇತ್ತು. ಅದಕ್ಕೆ ಪ್ರತಿದಿವಸವು ದೊಡ್ಡ ದೊಡ್ಡ ಅನ್ನದ ಮುದ್ದೆಗಳನ್ನು ತಿನ್ನಿಸುತ್ತಿದ್ದರು. ರಾಜನಿಗೆ ತನ್ನ ಪಟ್ಟದ ಆನೆಯನ್ನು ಕಂಡರೆ ತುಂಭಾ ಸಂತೋಷವಾಗುತ್ತಿತ್ತು. ಬಿಡುವಾದಾಗ ದೊರೆ ತಾನೆ ಬಂದು ತನ್ನ ಕೈಯಾರೆ ಆನೆಗೆ ಅನ್ನದ ಮುದ್ದೆಗಳನ್ನು ತಿನ್ನಿಸುತ್ತಿದ್ದ.  ಆನೆ  ನಾಯಿಯನ್ನು ಕರೆದು ಪ್ರೀತಿಯಿಂದ ಒಂದು ಮುದ್ದೆ ಅನ್ನವನ್ನು ಹಾಕಿತು. ನಾಯಿ ತನ್ನ ಜನುಮದಲ್ಲಿ ಎಂದು ಸೊಗಸಾದ ಅನ್ನ ತಿಂದಿರಲ್ಲಿಲ್ಲ ಆನೆಯನ್ನು ಕಂಡು ಅದಕ್ಕೆ ಹೆದರಿಕೆ ಇದ್ದರು,  ಅನ್ನದ ಮೇಲಿನ ಆಸೆಯಿಂದ ಮುಂದೆ ಬಂದು ಇಡಿಯ ಮುದ್ದೆಯಲ್ಲಿ ಒಂದು ಅಗಳು ಬಿಡದೆ ಹಾಗೇ ತಿಂದು ಬಿಟ್ಟಿತು. ನಾಯಿ ಅನ್ನ ತಿನ್ನುವಾಗ ಆನೆ ಪ್ರೀತಿಯಿಂದ ಅದರ ಬೆನ್ನನ್ನು ಸವರುತ್ತಿತ್ತು.                                                                                                                                                                                   

Saturday, July 5, 2014

ಡೊಳ್ಳು ಕುಣಿತ











ಡೊಳ್ಳು ಕುಣಿತದ ಪ್ರತ್ಯಾಕ್ಷಿಕೆ

ಡೊಳ್ಳು ಬಾರಿಸುವುದರಲ್ಲಿ ಮಕ್ಕಳು

ಮೂಡಲಕೊಪ್ಪಲು ಸರಕಾರೀ ಪ್ರೌಢಶಾಲೆ ಯಲ್ಲಿ ದಿನಾಂಕ ೦೪. ೦೭. ೨೦೧೪ ರ ಶುಕ್ರವಾರ ರಂಗ - ಪಠ್ಯ - ಪ್ರದರ್ಶನ ಯೋಜನೆಯ ಅಡಿಯಲ್ಲಿ ಡೊಳ್ಳು ಕುಣಿತದ ಪ್ರತ್ಯಾಕ್ಷಿಕೆಯನ್ನು ನೆಡೆಸಲಾಯಿತು. ಮಕ್ಕಳ ಪಠ್ಯವನ್ನು ರಂಗಕ್ಕೆ ತರುವ ಪ್ರಯತ್ನದಲ್ಲಿರುವ ನಾಟಕ ಶಿಕ್ಷಕಿಯಾದ ಶ್ರೀಮತಿ ಶಾಂತಮಣಿ ಯವರು ಸ್ಥಳೀಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ ಶಿಕ್ಷಕರು ಬೋಧನೆಯೊಂದಿಗೆ ಪ್ರಾಯೋಗಿಕವಾಗಿ ವಿವಿಧ ಪ್ರಕಾರಗಳನ್ನು ಪರಿಚಯಿಸುವುದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಯಪಡಿಸುತ್ತಾ ತಾವು ನಡೆಸುತ್ತಿರುವ ಯೋಜನೆಯ ಭಾಗವಾಗಿ ಸ್ಥಳೀಯ ಪ್ರಕಾರಗಳನ್ನು ಅವಲೋಕಿಸುವುದರ ಜೊತೆಗೆ ಮಕ್ಕಳು ಅಭ್ಯಾಸ ಮಾಡಬೇಕು ಎಂಬ ಇಚ್ಚೆಯನ್ನು ವ್ಯಕ್ತಪಡಿಸಿದರು. 
ಶಿಕ್ಷಕಿ ಡೊಳ್ಳು ಬಾರಿಸುತ್ತಿರುವುದು.

ನಾಟಕ ಶಿಕ್ಷಕಿ ಶಾಂತಮಣಿ
  ಈಗಾಗಲೇ ತಾಲೂಕಿನ ಆಯ್ದ ಶಿಕ್ಷಕರಿಗೆ ಪಠ್ಯವನ್ನು ರಂಗಪಠ್ಯವಾಗಿ ಹೇಗೆ ಮಾಡಿಕೊಳ್ಳಬೇಕು ಎಂದು ಎರಡು ಹಂತದ ತರಬೇತಿಯನ್ನು ನಡೆಸಿದ್ದು ತರಬೇತಿ ಪಡೆದ ಶಿಕ್ಷಕರು ಪಠ್ಯವನ್ನು ನಾಟಕ ರೂಪದಲ್ಲಿ ಸ್ಕ್ರಿಪ್ಟ್ ತಯಾರಿ ಮಾಡಿ ತಮ್ಮ ಶಾಲೆಗಳ ಮಕ್ಕಳಿಗೆ ತರಬೇತಿಯನ್ನು ನೀಡಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಎಂದು ನಾಟಕ ಶಿಕ್ಷಕಿಯಾದ  ಶ್ರೀಮತಿ ಶಾಂತಮಣಿ ಯವರು ತಿಳಿಯಪಡಿಸಿದರು.


ಹತ್ತಿರದ ಜಕ್ಕನಹಳ್ಳಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು  ಮೂಡಲಕೊಪ್ಪಲು ಪ್ರೌಢಶಾಲೆಯಲ್ಲಿ  ಶುಕ್ರುವಾರ ಮಧ್ಯಾಹ್ನ ೩. ೦೦ ಗಂಟೆಗೆ ಡೊಳ್ಳು ಕುಣಿತವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದರು. ಜೊತೆಗೆ ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕೋಲಾಟವನ್ನು ಪ್ರದರ್ಶಿಸಿದರು. ಡೊಳ್ಳು ಕುಣಿತದ ಪ್ರದರ್ಶನವನ್ನು ವೀಕ್ಷಿಸುತ್ತಾ ಭಾವುಕರಾದ ಶಿಕ್ಷಕರು ತಾವು ಡೊಳ್ಳನ್ನು ಬಾರಿಸಿ ಆನಂದ ಪಟ್ಟರು. ಜಕ್ಕನಹಳ್ಳಿ ಶಾಲೆಯಿಂದ ವಿದ್ಯಾರ್ಥಿಗಳನ್ನು  ಶಿಕ್ಷಕರಾದ ಲಿಂಗರಾಜು ಅವರು ಕರೆದುಕೊಂಡು ಬಂದಿದ್ದರು.

       
       ಸ್ಥಳಿಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಮುಂದೆ ಇವುಗಳನ್ನು ಉಳಿಸಿಕೊಂಡು ಹೋಗಬೇಕಾಗಿರುವುದರ ಕುರಿತು ತಿಳಿಸುತ್ತಾ ಪ್ರತಿ ಪ್ರೌಢಶಾಲೆಗಳಲ್ಲಿ ಇಂಥಹ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದು ನಾಟಕ ಶಿಕ್ಷಕಿ ಶಾಂತಮಣಿಯವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಹತ್ ಜಾನ್ , ಶ್ರೀ ಬೋರೆಗೌಡ, ಶ್ರೀ ಮರಿಸ್ವಾಮಿಗೌಡ, ಶ್ರೀ ಲೋಕೇಶ್, ಶ್ರೀಮತಿ ಪವಿತ್ರ, ಶ್ರೀ ನಿತೀಶ್ ಹಾಗೂ ಶ್ರೀರಮೇಶ್ ಅವರು ಭಾಗವಹಿಸಿದ್ದರು.

Monday, June 16, 2014

ಶಾಲೆ ಪ್ರಾರಂಭವಾಗಿವೆ ನಮ್ಮ ಚಟುವತಿಕೆಗಳು ಗರಿಗೆದರಿವೆ. ಬನ್ನಿ ಚಟುವತಿಕೆಗಳಿಗೆ ಜೀವ ತುಂಬೋಣ

Sunday, May 18, 2014

ಅತಿ ಆಸೆ ಗತಿ ಗೇಡು



ಒಂದು ಊರಿನಲ್ಲಿ ಒಬ್ಬ ಬಡವ ಇದ್ದ. ಅವನು ದೇವರಲ್ಲಿ ನನಗೆ ಒಂದು ಚಿನ್ನದ ಕೋಳಿಯನ್ನು ಕೊಡು ಎಂದು ಮೊರೆಯಿಟ್ಟ . ದೆವರು ಅವನ ಇಷ್ಟದಂತೆಯೆ ಅವನಿಗೆ ಕೋಳೀಯನ್ನು ಕೊಟ್ಟಿತು.ಹೀಗೆ ಹಲವು ದಿನಗಳು ಕಳೆದವು. ಬಡವನ ಆಸೆಯಂತೆ  ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು .ಬಡವ ಪ್ರತಿ ದಿನ ನಾನು ಮೊಟ್ಟೆಯನ್ನು ತೆಗೆಯಬೆಕಲ್ಲ ಎಂದು ಯೋಚಿಸಿ ಆತೀಯಾದ ಆಸೆಯಿಂದ  ಕೋಳಿಯನ್ನೆ ಕುಯ್ದುಬಿಟ್ಟ .    



Friday, February 21, 2014

ಶಿಕ್ಷಕರ ಕಾರ್ಯಗಾರ

ಕಥೆಯ ರಚನೆಯಲ್ಲಿ ವಿದ್ಯಾರ್ಥಿಗಳು

ಸಂಪನ್ಮೂಲ ವ್ಯಕ್ತಿಯಾದ ಮಲ್ಲೇಶ್ ಪಾವಗಡ

ಗುಂಪು ಚರ್ಚೆಯಲ್ಲಿ ಶಿಕ್ಷಕರು

ಗುಂಪು ಚರ್ಚೆಯಲ್ಲಿ ಶಿಕ್ಷಕರು

ಮಕ್ಕಳೊಂದಿಗೆ ಗುರುರಾಜ್ ಸಂಪನ್ಮೂಲ ವ್ಯಕ್ತಿಗಳು

ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು


ಉದ್ಘಾಟನೆ

ರಂಗ-ಪಠ್ಯ-ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮುಖ್ಯೋಪಾಧ್ಯಯರು, ಹಿರಿಯ ಶಿಕ್ಷಕರಾದ ಬೋರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಮಲ್ಲೇಶ್, ಲೋಕೇಶ್ ಹಾಗೂ ಯೋಜನೆಯ ಸಂಚಾಲಕಿಯಾದ ಶ್ರೀಮತಿ ಶಾಂತಮಣಿ ಚಿತ್ರದಲ್ಲಿದ್ದಾರೆ.

ಮರಿಸ್ವಾಮಿಗೌಡ

ಎಸ್.ಡಿ.ಎಮ್.ಸಿ ಅಧ್ಯಕ್ಷರಿಂದ ಉದ್ಗಾಟನೆ

ಕನ್ನಡ ಶಿಕ್ಷಕಿಯಿಂದ ಕಾವ್ಯ ವಾಚನ
ಅಧ್ಯಕ್ಷರ ನುಡಿ

ಸಂಚಾಲಕಿ ಶ್ರೀಮತಿ ಶಾಂತಮಣಿ




Thursday, February 20, 2014

ರಂಗ - ಪಠ್ಯ - ಪ್ರದರ್ಶನ

ರಂಗ - ಪಠ್ಯ - ಪ್ರದರ್ಶನ ದ ಯೋಜನೆಯನ್ನು ನಮ್ಮ ಪ್ರೌಢಶಾಲೆಯಲ್ಲಿ ಕಲಿ-ಕಲಿಸು ವಿನ ಅಡಿಯಲ್ಲಿ ನಡೆಸುತಲಿದ್ದು ಇದರ ಎಲ್ಲ ಸಹಕಾರವನ್ನು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ - ಬೆಂಗಳೂರು, ಸರ್ವ ಶಿಕ್ಷಣ ಅಭಿಯಾನ - ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ - ಪಾಂಡವಪುರ ದೊಂದಿಗೆ ನಮ್ಮ ಪ್ರೌಢಶಾಲೆ, ಮೂಡಲುಕೊಪ್ಪಲಿನ ಶಿಕ್ಷಕ ವೃಂದ, ಜನತೆಯ ಸಂಪೂರ್ಣ ಸಹಕಾರ ನಮ್ಮ ಈ ಯೋಜನಿಗಿದೆ.