ಡೊಳ್ಳು ಬಾರಿಸುವುದರಲ್ಲಿ ಮಕ್ಕಳು |
ಮೂಡಲಕೊಪ್ಪಲು ಸರಕಾರೀ ಪ್ರೌಢಶಾಲೆ ಯಲ್ಲಿ ದಿನಾಂಕ ೦೪. ೦೭. ೨೦೧೪ ರ ಶುಕ್ರವಾರ ರಂಗ - ಪಠ್ಯ - ಪ್ರದರ್ಶನ ಯೋಜನೆಯ ಅಡಿಯಲ್ಲಿ ಡೊಳ್ಳು ಕುಣಿತದ ಪ್ರತ್ಯಾಕ್ಷಿಕೆಯನ್ನು ನೆಡೆಸಲಾಯಿತು. ಮಕ್ಕಳ ಪಠ್ಯವನ್ನು ರಂಗಕ್ಕೆ ತರುವ ಪ್ರಯತ್ನದಲ್ಲಿರುವ ನಾಟಕ ಶಿಕ್ಷಕಿಯಾದ ಶ್ರೀಮತಿ ಶಾಂತಮಣಿ ಯವರು ಸ್ಥಳೀಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ ಶಿಕ್ಷಕರು ಬೋಧನೆಯೊಂದಿಗೆ ಪ್ರಾಯೋಗಿಕವಾಗಿ ವಿವಿಧ ಪ್ರಕಾರಗಳನ್ನು ಪರಿಚಯಿಸುವುದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಯಪಡಿಸುತ್ತಾ ತಾವು ನಡೆಸುತ್ತಿರುವ ಯೋಜನೆಯ ಭಾಗವಾಗಿ ಸ್ಥಳೀಯ ಪ್ರಕಾರಗಳನ್ನು ಅವಲೋಕಿಸುವುದರ ಜೊತೆಗೆ ಮಕ್ಕಳು ಅಭ್ಯಾಸ ಮಾಡಬೇಕು ಎಂಬ ಇಚ್ಚೆಯನ್ನು ವ್ಯಕ್ತಪಡಿಸಿದರು.
ಶಿಕ್ಷಕಿ ಡೊಳ್ಳು ಬಾರಿಸುತ್ತಿರುವುದು. |
ನಾಟಕ ಶಿಕ್ಷಕಿ ಶಾಂತಮಣಿ |
ಹತ್ತಿರದ ಜಕ್ಕನಹಳ್ಳಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೂಡಲಕೊಪ್ಪಲು ಪ್ರೌಢಶಾಲೆಯಲ್ಲಿ ಶುಕ್ರುವಾರ ಮಧ್ಯಾಹ್ನ ೩. ೦೦ ಗಂಟೆಗೆ ಡೊಳ್ಳು ಕುಣಿತವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದರು. ಜೊತೆಗೆ ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕೋಲಾಟವನ್ನು ಪ್ರದರ್ಶಿಸಿದರು. ಡೊಳ್ಳು ಕುಣಿತದ ಪ್ರದರ್ಶನವನ್ನು ವೀಕ್ಷಿಸುತ್ತಾ ಭಾವುಕರಾದ ಶಿಕ್ಷಕರು ತಾವು ಡೊಳ್ಳನ್ನು ಬಾರಿಸಿ ಆನಂದ ಪಟ್ಟರು. ಜಕ್ಕನಹಳ್ಳಿ ಶಾಲೆಯಿಂದ ವಿದ್ಯಾರ್ಥಿಗಳನ್ನು ಶಿಕ್ಷಕರಾದ ಲಿಂಗರಾಜು ಅವರು ಕರೆದುಕೊಂಡು ಬಂದಿದ್ದರು.
ಸ್ಥಳಿಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಮುಂದೆ ಇವುಗಳನ್ನು
ಉಳಿಸಿಕೊಂಡು ಹೋಗಬೇಕಾಗಿರುವುದರ ಕುರಿತು ತಿಳಿಸುತ್ತಾ ಪ್ರತಿ ಪ್ರೌಢಶಾಲೆಗಳಲ್ಲಿ ಇಂಥಹ
ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದು ನಾಟಕ ಶಿಕ್ಷಕಿ ಶಾಂತಮಣಿಯವರು ತಿಳಿಸಿದರು. ಕಾರ್ಯಕ್ರಮದಲ್ಲಿ
ಮುಖ್ಯೋಪಾಧ್ಯಾಯರಾದ ಶ್ರೀಮತಿ ರಹತ್ ಜಾನ್ , ಶ್ರೀ ಬೋರೆಗೌಡ, ಶ್ರೀ ಮರಿಸ್ವಾಮಿಗೌಡ,
ಶ್ರೀ ಲೋಕೇಶ್, ಶ್ರೀಮತಿ ಪವಿತ್ರ, ಶ್ರೀ ನಿತೀಶ್ ಹಾಗೂ ಶ್ರೀರಮೇಶ್ ಅವರು
ಭಾಗವಹಿಸಿದ್ದರು.
No comments:
Post a Comment