ಮಕ್ಕಳ ರೈಲು ಬಂತು
ಚುಕ್ಕು ಚುಕ್ಕು ಚುಕ್ಕೂ
ಮರದಲ್ಲಿ ಹಕ್ಕಿಯೊಂದು
ಕುಕ್ಕು ಕುಕ್ಕು ಕುಕ್ಕೂ
ಕುರುಕು ತಿಂಡಿಯನ್ನು
ಮುಕ್ಕು ಮುಕ್ಕು ಮುಕ್ಕೂ
ಪರೀಕ್ಷೆಯಲ್ಲಿ ಉತ್ತರವ
ಕಕ್ಕು ಕಕ್ಕು ಕಕ್ಕೂ
ಜಾಡಿಯ ಉಪ್ಪಿನಕಾಯಿ
ನೆಕ್ಕು ನೆಕ್ಕು ನೆಕ್ಕೂ
ಬಾಯಿ ಖಾರವಾದರೆ
ಹುಕ್ಕು ಹುಕ್ಕು ಹುಕ್ಕೂ
ರಜೆಯಲ್ಲಿ ಪಠ್ಯಕ್ಕೆ
ತುಕ್ಕು ತುಕ್ಕು ತುಕ್ಕೂ
ಶಾಲೆ ಶುರುವಾದಾಗ
ಬಿಕ್ಕು ಬಿಕ್ಕು ಬಿಕ್ಕೂ
ದುಷ್ಟನಾ ಮೈತುಂಬಾ
ಸೊಕ್ಕು ಸೊಕ್ಕು ಸೊಕ್ಕೂ
ಆಳಿಗೊಂದು ಗುದ್ದನ್ನು
ಹಾಕು ಹಾಕು ಹಾಕೂ
ಅಜ್ಜಿಯ ಚರ್ಮವೆಲ್ಲಾ
ಸುಕ್ಕು ಸುಕ್ಕು ಸುಕ್ಕೂ
ಅಜ್ಜಿ ಕತೆ ಕೇಳಿ ಎಲ್ಲಾ
ನಕ್ಕು ನಕ್ಕು ನಕ್ಕೂ
ನಾಯಿಯು ಬೊಗಳುವುದು
ಬ್ಯಕ್ಕು ಬ್ಯಕ್ಕು ಬ್ಯಕ್ಕೂ
ಕುದುರೆಯು ಓಡುವುದು
ಟೊಕ್ಕು ಟೊಕ್ಕು ಟೊಕ್ಕೂ
ಮನೆಯಲ್ಲಿರಲಿ ನಾಯಿ ಜೊತೆ
ಬೆಕ್ಕು ಬೆಕ್ಕು ಬೆಕ್ಕೂ
ಜೊತೆಗಿಷ್ಟು ಹಕ್ಕಿಗಳು
ಬೇಕು ಬೇಕು ಬೇಕೂ
ಅಮ್ಮನ ಕೂದಲೆಲ್ಲಾ
ಸಿಕ್ಕು ಸಿಕ್ಕು ಸಿಕ್ಕೂ
ಅಪ್ಪನ ಬೂಟು ದನಿ
ಟಕ್ಕು ಟಕ್ಕು ಟಕ್ಕೂ
ಯಾವಾಗಲೂ ಮಿನುಗಬೇಕು
ಲಕ್ಕು ಲಕ್ಕು ಲಕ್ಕೂ
ಇಲ್ಲವಾದ್ರೆ ಮುಸ್ರೆ ಪಾತ್ರೆ
ತಿಕ್ಕು ತಿಕ್ಕು ತಿಕ್ಕೂ
ಓದಬೇಕು ರಾಶಿ ರಾಶಿ
ಬುಕ್ಕು ಬುಕ್ಕು ಬುಕ್ಕೂ
ಒಳ್ಳೆಯ ವಿಷಯವನ್ನೆ
ಹೆಕ್ಕು ಹೆಕ್ಕು ಹೆಕ್ಕೂ
ಪರೀಕ್ಷೆ ಬಂತಂದ್ರೆ
ಪುಕ್ಕು ಪುಕ್ಕು ಪುಕ್ಕೂ
ಮೇಷ್ಟರು ಕೊಡ್ತಾರೆ
ಕಿಕ್ಕು ಕಿಕ್ಕು ಕಿಕ್ಕೂ
ಮಕ್ಕಳ ಸಂಭ್ರಮದ
ಉಕ್ಕು ಉಕ್ಕು ಉಕ್ಕೂ
ನೋಡಲು ಚಂದ ಅದರ
ಲಕ್ಕು ಲಕ್ಕು ಲಕ್ಕೂ
ತೋರಬೇಕು ಮಕ್ಕಳಿಗೊಳ್ಳೆ
ದಿಕ್ಕು ದಿಕ್ಕು ದಿಕ್ಕೂ
ದಕ್ಕಬೇಕು ಮಕ್ಕಳಿಗವರ
ಹಕ್ಕು ಹಕ್ಕು ಹಕ್ಕು
ಮುದ್ದು ತೀರ್ಥಹಳ್ಳಿ
( ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟ )
No comments:
Post a Comment