ಇಂದು ಮುಂಜಾನೆ ಅವಧಿಯಲ್ಲಿ ಸರಕಾರಿ ಪ್ರೌಢಶಾಲೆ ಕುಕುನೂರಿನಲ್ಲಿ ಹಾಗೂ ಮಧ್ಯಾಹ್ನ2:00 ಗಂಟೆಗೆ ಯಲಬುರ್ಗಾದ ಸ ಪ ಪೂ ಕಾಲೇಜಿನಲ್ಲಿ ಕುಕನೂರ ಹಾಗೂ ಯಲಬುರ್ಗಾ ತಾಲೂಕಿನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾನ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಎಚ್ ಎಚ್ ಮೀಟಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮೌನೇಶ್ ಬಡಿಗೇರ್ ಸರ್ ಕ್ಷೇತ್ರಸಮನ್ವಯಾಧಿಕಾರಿಗಳಾದ ಶ್ರೀ ಶರಣಪ್ಪ ಕೊಪ್ಪದ್, ಶಿಕ್ಷಣ ಸಂಯೋಜಕರು, ಬಿ ಆರ್ ಪಿ ಗಳು, ಸಿ ಆರ್ ಪಿ ಗಳು ಭಾಗವಹಿಸಿದ್ದರು .
ಸಭೆಯಲ್ಲಿ ಚರ್ಚಿಸಿದ ಅಂಶಗಳು
1) ಶಾಲಾ ಕೊಠಡಿಗಳ ದುರಸ್ತಿ ಹಾಗೂ ಮರುನಿರ್ಮಾಣ ಮಾಹಿತಿ ( ನಮೂನೆ 1)
2) ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ನಡೆಸಲಿರುವ ಸಮೀಕ್ಷಾ ಕಾರ್ಯ
3) ಓದುವ ಬೆಳಕು ಕಾರ್ಯಕ್ರಮ ಅನುಪಾಲನೆ
4) ವಿದ್ಯಾಗಮ ಕಾರ್ಯಕ್ರಮದ ವಿಶ್ಲೇಷಣೆ
5) ಸಂವೇದ ಕಾರ್ಯಕ್ರಮದ ಅನುಪಾಲನೆ
6) ಏನ್ ಟಿ ಎಸ್ ಈ, ಏನ್ ಎಂ ಎಂ ಎಸ್ ಅರ್ಜಿ ಹಾಕುವ ಕುರಿತು
7 ) ಕಲೋತ್ಸವ ಕಾರ್ಯ ಕ್ರಮ
8) ನವ ಮತದಾರರ ನೋಂದಣಿ ಹಾಗೂ ಮತದಾನ ಕುರಿತು ಜಾಗ್ರತಿ ಮೂಡಿಸುವ ಕಾರ್ಯಕ್ರಮ
ಇತ್ಯಾದಿ.
ಭಾಗವಹಿಸಿದ ಸರ್ವರಿಗೂ ಧನ್ಯವಾದಗಳು
No comments:
Post a Comment