Wednesday, December 9, 2020

ಪ್ರಶಂಸಾ ಪತ್ರ

 

ಪ್ರಶಂಸಾ ಪತ್ರ 

ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ

  ಇಂದು ಮುಂಜಾನೆ ಅವಧಿಯಲ್ಲಿ ಸರಕಾರಿ ಪ್ರೌಢಶಾಲೆ ಕುಕುನೂರಿನಲ್ಲಿ ಹಾಗೂ ಮಧ್ಯಾಹ್ನ2:00 ಗಂಟೆಗೆ ಯಲಬುರ್ಗಾದ ಸ ಪ ಪೂ ಕಾಲೇಜಿನಲ್ಲಿ ಕುಕನೂರ ಹಾಗೂ ಯಲಬುರ್ಗಾ ತಾಲೂಕಿನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾನ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಎಚ್ ಎಚ್ ಮೀಟಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮೌನೇಶ್ ಬಡಿಗೇರ್ ಸರ್ ಕ್ಷೇತ್ರಸಮನ್ವಯಾಧಿಕಾರಿಗಳಾದ ಶ್ರೀ ಶರಣಪ್ಪ ಕೊಪ್ಪದ್, ಶಿಕ್ಷಣ ಸಂಯೋಜಕರು, ಬಿ ಆರ್ ಪಿ ಗಳು, ಸಿ ಆರ್ ಪಿ ಗಳು ಭಾಗವಹಿಸಿದ್ದರು .








ಸಭೆಯಲ್ಲಿ ಚರ್ಚಿಸಿದ ಅಂಶಗಳು

1) ಶಾಲಾ ಕೊಠಡಿಗಳ ದುರಸ್ತಿ ಹಾಗೂ ಮರುನಿರ್ಮಾಣ ಮಾಹಿತಿ ( ನಮೂನೆ 1)
2) ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ನಡೆಸಲಿರುವ ಸಮೀಕ್ಷಾ ಕಾರ್ಯ
3) ಓದುವ ಬೆಳಕು ಕಾರ್ಯಕ್ರಮ ಅನುಪಾಲನೆ
4) ವಿದ್ಯಾಗಮ ಕಾರ್ಯಕ್ರಮದ ವಿಶ್ಲೇಷಣೆ
5) ಸಂವೇದ ಕಾರ್ಯಕ್ರಮದ ಅನುಪಾಲನೆ
6) ಏನ್ ಟಿ ಎಸ್ ಈ, ಏನ್ ಎಂ ಎಂ ಎಸ್ ಅರ್ಜಿ ಹಾಕುವ ಕುರಿತು
7 ) ಕಲೋತ್ಸವ ಕಾರ್ಯ ಕ್ರಮ
8) ನವ ಮತದಾರರ ನೋಂದಣಿ ಹಾಗೂ ಮತದಾನ ಕುರಿತು ಜಾಗ್ರತಿ ಮೂಡಿಸುವ ಕಾರ್ಯಕ್ರಮ
ಇತ್ಯಾದಿ.

ಭಾಗವಹಿಸಿದ ಸರ್ವರಿಗೂ ಧನ್ಯವಾದಗಳು

Thursday, December 3, 2020

ಕನಕದಾಸ ಜಯಂತಿ

ನಮ್ಮ ಶಾಲೆಯಲ್ಲಿ ಸರಳವಾಗಿ ಕನಕದಾಸ ಜಯಂತಿ ಯನ್ನು ಆಚರಿಸಲಾಯಿತು.

Thursday, November 19, 2020

Summer Home Work

ವಿಭಾಗ ಮಟ್ಟದ Summer Home Work ನಲ್ಲಿ ಶಿಕ್ಷಣ ಕುರಿತು ಬರೆದ ಲೇಖನ ಆಯ್ಕೆಯಾಗಿ ಇಂದು ಮಾನ್ಯ ಅಪರ ಆಯುಕ್ತರಾದ ನಳಿನ್ ಅತುಲ್ ಸಾರ್ ಅವರು ಸನ್ಮಾನಿಸಿ ಗೌರವಿಸಿದರು.



Thursday, August 6, 2020

ಮಗಳು

ಸ್ವಚ್ಚತೆ

Thursday, July 30, 2020

ಮಲ್ಲಿಗೆ ಬಳ್ಳಿ

ಮಲ್ಲಿಗೆ ಬಳ್ಳಿ

Monday, July 20, 2020

ಕನ್ನಡ ವರ್ಣಮಾಲೆಗಳನ್ನು ಮುತ್ತಾಗಿ ಜೋಡಿಸಿದ್ದಾರೆ ನೋಡಿ

ಇಷ್ಟು ಚೆನ್ನಾಗಿ ಜೋಡಿಸಿ ಬರೆದ ವರಿಗೆ
ಒಂದು ನಮಸ್ಕಾರ.
ಕನ್ನಡ ವರ್ಣಮಾಲೆಗಳನ್ನು ಮುತ್ತಾಗಿ ಜೋಡಿಸಿದ್ದಾರೆ ನೋಡಿ

*ಅ* ರೆ
*ಆ* ತ್ಮೀಯ ಬಂಧುಗಳೇ
*ಇ* ದೀಗ ನಮ್ಮನ್ನು ಕಾಡುತ್ತಿರುವ
*ಈ* ಸಮಸ್ಯೆಯನ್ನು ಬಗೆಹರಿಸುವ
*ಉ* ಪಾಯ ನಮ್ಮಲ್ಲೇ ಇದೆ
*ಊ* ರ/ದೇಶದ 
*ಋ* ಣ ತೀರಿಸಲು ಸದವಕಾಶ.
*ಎ* ಲ್ಲೂ ಹೋಗದೆ
*ಏ* ಳು ಬೀಳುಗಳನ್ನು ಸಹಿಸಿ
*ಐ* ಷಾರಾಮಗಳನ್ನೆಲ್ಲ ತೊರೆದು
*ಒ* ಡನಾಡಿಗಳೊಂದಿಗೆ ಬೆರೆತು
*ಓ* ದುವ / ಬರೆಯುವ
*ಔ* ದಾರ್ಯವನ್ನು ಮೆರೆದರೆ
*ಅಂ* ಕುಶವ ಹಾಕಿ ಈ
*ಅಹಂ* ಕಾರಿ ವೈರಾಣುವನ್ನು ತಡೆಯಬಹುದು

*ಕ* ಠಿಣವಾದ ಈ ಪರಿಸ್ಥಿತಿಯಲ್ಲಿ
*ಖಂ* ಡಿತವಾಗಿಯೂ
*ಗ* ಮನವಿಟ್ಟು ನಮ್ಮ
*ಘ* ನ ಸರ್ಕಾರದ
*ಜ್ಞಾ* ಪನೆಗಳನ್ನು ಪಾಲಿಸೋಣ
*ಚ* ಮತ್ಕಾರಗಳನ್ನು ನಿರೀಕ್ಷಿಸದೆ
*ಛ* ಲದಿಂದ ಹೋರಾಡಿ
*ಜ* ನಜಂಗುಳಿಯಿಂದ ದೂರವಿರುತ್ತ,  ಸೂರ್ಯನ 
*ಝ* ಳವನ್ನು ಆನಂದಿಸುತ್ತಾ, 
ತ *ಜ್ಞ* ರ ಮಾತಿಗೆ ಬೆಲೆ ಕೊಟ್ಟು
*ಟ* ಲಾಯಿಸುತ್ತಾ ಅತ್ತಿಂದಿತ್ತ ಮನೆಯಲ್ಲೇ
*ಠ* ಸ್ಸೆ ಹೊಡೆಸಿಕೊಂಡವರನ್ನು ದೂರವಿರಿಸಿ,
*ಡಂ* ಬಾಚಾರಕ್ಕೆ ಎಡೆಗೊಡದೆ
*ಢ* ವಗುಟ್ಟುವ ಎದೆಯನ್ನು ಸ್ಥಿಮಿತ ದಲ್ಲಿಇರಿಸೋ *ಣ* . ಹೀಗಿದ್ದಲ್ಲಿ
*ತ* ಡೆಗಟ್ಟಬಹುದು
*ಥ* ರಥರ ನಡುಗಿಸುವ ಈ ಮಾರಿಯನ್ನು. 
*ದ* ಯವಿಟ್ಟು ಈ ಪರಿಸ್ಥಿತಿಯಲ್ಲಿ ನಮ್ಮ
ದಂ *ಧೆ* ಗೆ ವಿರಾಮ ಕೊಟ್ಟು
*ನ* ಮ್ಮ ಆರೋಗ್ಯಕ್ಕೆ ಗಮನ ಕೊಟ್ಟು
*ಪ* ರಿಸರ ಸ್ನೇಹಿಗಳಾಗುತ್ತ ಅದರ
*ಫ* ಲವನ್ನು
*ಬ* ರುವ ದಿನಗಳಲ್ಲಿ ಅನುಭವಿಸಿ
*ಭ* ವಿಷ್ಯವನ್ನು ಭದ್ರ ಪಡಿಸಿಕೊಳ್ಳುವತ್ತ
*ಮ* ನಸ್ಸನ್ನು ಕೇಂದ್ರೀಕರಿಸೋಣ.
*ಯ* ಥಾಸ್ಥಿತಿ ತಲುಪುವ ವರೆಗೆ
*ರ* ಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು
*ಲ* ವಲವಿಕೆಯಿಂದ ಇರುತ್ತಾ
*ವ* ದಂತಿಗಳಿಗೆ ಕಿವಿಗೊಡದೆ
*ಶ* ರೀರದ ಶುಚಿತ್ವ ಕಾಪಾಡಿಕೊಂಡು ಸರ್ಕಾರದ
*ಷ* ರತ್ತುಗಳನ್ನು ಉಲ್ಲಂಘಿಸದೆ
*ಸ* ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಾ
*ಹ* ರಡುತ್ತಿರುವ ಈ ಸಾಂಕ್ರಾಮಿಕ ರೋಗದ
ಉಪಟ *ಳ* ದ ಅಂತ್ಯಕ್ಕೆ
*ಕ್ಷ* ಣ ಗಣನೆ ಶುರುವಾಗಲಿ ಎಂದು ಹಾರೈಸೋಣ..‌‌. 

ರಾಧಾ

ರಾಧಾ 

Thursday, February 27, 2020

ಕಲಿಕೆ ಹೇಗಿರಬೇಕು ?

ಇಂದಿನ ಮಕ್ಕಳಲ್ಲಿ ನಾವೇನು ಕಲಿಸುತ್ತಿದ್ದೇವೆ ಎಂಬುದನ್ನು ನಾವೇ ಮೊದಲು ಮನಗಾಣಬೇಕಿದೆ. ಪರೀಕ್ಷೆಯೇ ನಮ್ಮ ಅಂತಿಮ. ಅದಕ್ಕೆ ಬೇಕಾದ ತಯಾರಿಯನ್ನು ಮಾತ್ರ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎನ್ನುವುದಾದರೇ ನಾವು ನಮ್ಮ ಮಕ್ಕಳನ್ನು ಅಂಗವಿಕಲರನ್ನಾಗಿ ಮಾಡುತ್ತಿದ್ದೇವೆ ಎಂದೆನಿಸುತ್ತದೆ.  ಮಕ್ಕಳಿಗೆ  ಕಲಿಸಬೇಕಾದ ಸಾಕಷ್ಟು ಸೂಕ್ಷ್ಮತೆಗಳಿವೆ. ನಾವು ಆ ಕುರಿತು ಆಲೋಚಿಸಲೇ ಬೇಕಾಗಿದೆ. ನಾನೊಬ್ಬ ರಂಗಶಿಕ್ಷಕನಾಗಿ ಮಕ್ಕಳನ್ನು ಗಮನಿಸುವಾಗ ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಗಳಿದ್ದು ನಾವು ಯಾಕೆ ಗಮನಿಸುತ್ತಿಲ್ಲ ಎಂದೆನಿಸುತ್ತದೆ.

ಮೊದಲಿಗೆ ನಾವು ಮಕ್ಕಳ ಪ್ರಶ್ನೇಗಳಿಗೆ ಎಂದೂ ಉತ್ತರಿಸದೇ ಸಾಗುತ್ತಿದ್ದೇವೆ. ಮಕ್ಕಳ ಗೊಂದಲಗಳಿಗೆ ಮಕ್ಕಳೇ ಪರಿಹಾರ ಕಂಡುಕೊಳ್ಳುವ ಸಂದರ್ಭವನ್ನು ನಾವು ಮಾಡಿ ಕೊಡುತ್ತಿಲ್ಲ. ಯಾಕೆ ನಾವು ಪಾಠದ ತಿರಳನ್ನು ಹೊಸ ಅರ್ಥಗಳನ್ನು ಮಕ್ಕಳೊಂದಿಗೆ ಚರ್ಚಿಸದೇ ಸಾಗುತ್ತಿದ್ದೇವೆ...? ಒಂದು ಪಾಠದ ವಿಷಯ ವಸ್ತುಗೆ  ಸಮಾನವಾಗಿ ಇತರರು ಬರೆದ ಕಥೆಯನ್ನೋ, ಲೇಖನವನ್ನೋ ಅಥಾವ ಕವಿತೆಯನ್ನೋ ಉದಾಹರಿಸದೇ ಹೋಗುತ್ತಿದ್ದೇವೆ ? 

ನಿನ್ನೆ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಒಂದು ತಾಲೂಕಿನಿಂದ ಬಂದ ಶಾಲೆಯ ಮಕ್ಕಳು ಬಿಲ್ಲಹಬ್ಬ ಪಾಠವನ್ನು ನಾಟಕವಾಗಿ ಪ್ರದರ್ಶಿಸುತ್ತಿದ್ದಾಗ ಇತ್ತಿಚಿನ ಸಿನಿಮಾ ಒಂದರ ನಾಯಕನ ಪ್ರವೇಶದ ಸಂಗೀತವನ್ನು ಬಳಸಿಕೊಂಡಿದ್ದರು. ಆದರೆ ಗಮನಿಸಬೇಕಾದ ಅಂಶವೆಂದರೇ ಕಂಸನ ಪ್ರವೇಶದಲ್ಲಿ ಸುಯೋದನ... ಎಂದು ಬಂದಾಗ ಹೇಗೆ ಸ್ವೀಕರಿಸಬೇಕು...
ಮತ್ತೊಂದು ತಂಡ ಸಂಗೊಳ್ಳಿ ರಾಯಣ್ಣನ ನಾಟಕದಲ್ಲಿ ರಾಯಣ್ಣನ ತಾಯಿ ಬ್ರಿಟೀಷ ಅಧಿಕಾರಿಯನ್ನು ಮನೆಯಲ್ಲಿ ರಾಯಣ್ಣನಿಗೆ ತಿಳಿಯದಂತೆ ಮುಚ್ಚಿಡುತ್ತಾಳೆ ಎಂದು ಪ್ರದರ್ಶನದಲ್ಲಿ ತೋರ್ಪಡಿಸುತ್ತಾರೆ. ಈ ನಾಟಕಗಳ ಹಿಂದೆ ಇರುವ ಶಿಕ್ಷಕರು ಮಕ್ಕಳಿಂದ ಆಡಿಸುವ ಮಾತುಗಳು ತಪ್ಪಾಗದಂತೆ ಎಚ್ಚರ ವಹಿಸಬೇಕು. ಇಲ್ಲ ನಾವು ಮಾಡಿದ್ದೆ ಸರಿ ಎನ್ನುವುದಾದರೇ ಮಕ್ಕಳಲ್ಲಿ  ಶಿಕ್ಷಕರಾದ ನಾವೇ ಗೊಂದಲ ಮೂಡಿಸಿದಂತೆ ಆಗುತ್ತದೆ. ನಾವು ಶಿಕ್ಷಕರು ಮಕ್ಕಳನ್ನು ಕೇವಲ ಪರೀಕ್ಷೆಯ ದೃಷ್ಟಿಯನ್ನಿಟ್ಟುಕೊಂಡು ಬೋಧಿಸದೇ ಮಕ್ಕಳು ಪಾಠದ ಕುರಿತು ಸುಲಲಿತವಾಗಿ ಮಾತಾಡುಂತೆ, ಚರ್ಚಿಸುವಂತೆ, ಪಾಠದ ಲೇಖಕನನ್ನೇ ಪ್ರಶ್ನಿಸುವಂತೆ ಮಕ್ಕಳನ್ನು ಬಿಡಬೇಕಾಗಿದೆ. ನಾನು ಹಾಗೂ ನನ್ನ ವಿದ್ಯಾರ್ಥಿಗಳು ಹೀಗೆ ಇರಬೇಕೆಂದು ಬಯಸುವವ ನಾನು.

Saturday, February 1, 2020

Tuesday, January 28, 2020

ಬಾಲ ಶಂಕರ - ರವಿ ಯಮನೂರಪ್ಪ ಬಂಜತ್ರಿ ೯ ನೇ ತರಗತಿ


ಬಾಲ ಶಂಕರ  -  ರವಿ ಯಮನೂರಪ್ಪ ಬಂಜತ್ರಿ  ೯ ನೇ ತರಗತಿ 

ಪಕ್ಷಿಗಳು - ವಂದನಾ ಕಲಾಲ ೯ ನೇ ತರಗತಿ

ಪಕ್ಷಿಗಳು  -  ವಂದನಾ ಕಲಾಲ  ೯ ನೇ ತರಗತಿ 


Friday, January 24, 2020

ಡಾಂಬರು ಬಂದುದು

ಡಾಂಬರು ಬಂದುದು 



ದೇವನೂರ ಮಹಾದೇವ ಅವರ ಡಾಂಬರು ಬಂದದ್ದು ಕತೆ ಯನ್ನು ಆದರಿಸಿದ ನಾಟಕ 

ಡಾಂಬರು ಬಂದುದು