Tuesday, June 23, 2015
Thursday, May 14, 2015
100% Result
ಕಳೆದ ಬಾರಿಯಂತೆ ಈ ಬಾರಿಯೂ ನಮ್ಮ ಶಾಲೆಗೆ ಅತ್ಯುತ್ತಮ ಫಲಿತಾಂಶ ಬಂದಿದೆ. ಹತ್ತನೇ ವರ್ಗಕ್ಕೆ ಕುಳಿತ ಎಲ್ಲ ಮಕ್ಕಳು ಉತ್ತೀರ್ಣರಾಗಿ ಶೇ ೧೦೦ ರ ದಾಖಲೆಯನ್ನು ಮುಂದುವರೆಸಿದ್ದಾರೆ. ಮಕ್ಕಳು ಹಾಗೂ ಶ್ರಮವಹಿಸಿದ ಶಿಕ್ಷಕ ವೃಂದಕ್ಕೆ ಧನ್ಯಾವಾದಗಳನ್ನು ತಿಳಿಸುತ್ತಾ, ಈ ಬಾರಿ ನಮ್ಮ ಪಠ್ಯ - ಪ್ರದರ್ಶನದ ಕಾರ್ಯ ಫಲಿತಾಂಶದ ಉತ್ತಮಿಕೆಯಲ್ಲಿ ಪಾಲಿದೆ. ವಿದ್ಯಾರ್ಥಿಗಳೆಲ್ಲರಿಗೂ ಅಭಿನಂದಿಸುತ್ತೇವೆ.
Friday, April 24, 2015
Tuesday, April 21, 2015
ಬಿ. ಚಂದ್ರಶೇಖರ, ಬಿ.ಇ.ಒ, ಪಾಂಡವಪುರ
ಬಿ. ಚಂದ್ರಶೇಖರ
ಬಿ.ಇ.ಒ
ಪಾಂಡವಪುರ
ಸರ್ವ ಶಿಕ್ಷಣ ಅಭಿಯಾನ ರಾಜ್ಯ ಕಛೇರಿ ಹಾಗೂ ಐ.ಎಫ್.ಎ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ, ಮೂಢಲಕೊಪ್ಪಲು ಶಾಲೆಯಲ್ಲಿ ಕಲಿ ಕಲಿಸು ಕಾರ್ಯಕ್ರಮ ಸಂಬಂಧ ನಡೆದ ಎರಡು ದಿನಗಳ ಕಾರ್ಯಗಾರದಲ್ಲಿ ಪಾಲ್ಗೊಳ್ಳಲಾಯಿತು.
ಪ್ರಸಕ್ತ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಮೂಲ ಕಲೆಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ತರಗತಿ ಪಠ್ಯಕ್ಕೆ ಸಂಬಂಧಿಸಿದ ಕಲಿಕಾಂಶವನ್ನು ನಾಟಕ, ನೃತ್ಯ , ಸಂಗೀತದ ಮೂಲಕ ಹೇಳಿಕೊಡುವ ಕಲ್ಪನೆ ಅರ್ಥ ಪೂರ್ಣವಾದದ್ದು. ಮಗುವಿನ ಮನಸ್ಸನ್ನು ಅರಿತು ಅಭಿನಯದ ಮೂಲಕ ತರಗತಿ ನಿರ್ವಹಣೆ ಮಾಡಿದಾಗ ಕಲಿಕೆ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ.
ಈ ಹಿನ್ನಲೆಯಲ್ಲಿ ಕಾರ್ಯಗಾರದಲ್ಲಿ ಪಾಲ್ಗೊಂಡಿರುವ ಎಲ್ಲಾ ಶಿಕ್ಷಕರು ಇಲ್ಲಿ ಪಡೆದ ಅನುಭವಗಳನ್ನು ತಮ್ಮ ತಮ್ಮ ತರಗತಿ ಸನ್ನಿವೇಶದಲ್ಲಿ ಅನುಷ್ಟಾನಗೊಳಿಸುವ ಪ್ರಾಮಾಣಿಕ ಪ್ರಯತ್ನವಾದರೆ ಈ ಕಾರ್ಯಗಾರ ಯಶಸ್ಸನ್ನು ಪಡೆಯುವುದೆಂದು ನಿರೀಕ್ಷಿಸುತ್ತೇನೆ.
Thursday, January 22, 2015
Saturday, November 8, 2014
Sunday, November 2, 2014
Monday, October 13, 2014
Sunday, October 12, 2014
Sunday, August 24, 2014
ಬಿಸಿಯೂಟ
ಶಾಲಾ ತರಗತಿ ಕೋಣೆಗೆ ಸರ್ ಬಂದು ’ನಾಳೆಯಿಂದ ಬಿಸಿಯೂಟ ಇಲ್ಲ. ನೀವು ಬುತ್ತಿ ತರಬೇಕು ನೋಡಿ’ ಎಂದಾಕ್ಷಣ ಹಲವು ಮಕ್ಕಳ ಮುಖದಲ್ಲಿ ನಿರಾಸೆ ಸುಳಿದಾಡತೊಡಗಿತು. ಹಳ್ಳಿಯಲ್ಲಿ ಸಾಕಷ್ಟು ಸ್ಥಿತಿವಂತರಲ್ಲದ ಜನ, ಅವರ ಮಕ್ಕಳು ಶಾಲೆಗೆ ಹೋಗುವುದರಿಂದ ಒಂದೊಪ್ಪತ್ತಿನ ಊಟ ಹೊರಗಾಗುತ್ತಲ್ಲ ಎಂಬ ಆಲೋಚನೆಯಲ್ಲಿ ದುಡಿತದತ್ತ ಮನಸ್ಸು ಹರಿಸಿದ್ದಾರೆ. ಇಲ್ಲದೇ ಹೋಗಿದ್ದರೆ ಮಕ್ಕಳನ್ನು ದುಡಿಯಲಿಕ್ಕೆ ಕರೆದೊಯ್ಯುವ ಎಷ್ಟೋ ಪಾಲಕರು ನಮ್ಮ ಪ್ರತಿಯೊಂದ ಹಳ್ಳಿಯಲ್ಲಿ ಇದ್ದಾರೆ. ಬಿಸಿಯೂಟ ಸರ್ಕಾರ ಮಕ್ಕಳಿಗಾಗಿ ನೀಡಿರುವ ಒಂದು ವಿಶೇಷ ಯೋಜನೆ ಎನ್ನಬಹುದು.
ಶಾಲೆಯಲ್ಲಿ ಇಂದು ಮಕ್ಕಳಿಗಾಗಿ ವಿದ್ಯಾಭ್ಯಾಸ ಮಾತ್ರವಲ್ಲ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್, ವಿದ್ಯಾರ್ಥಿ ವೇತನ, ಹಾಲು, ಮಾತ್ರೆ ಹೀಗೆ ಹಲವಾರು ಯೋಜನೆಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕೈಗೊಂಡಿದ್ದಾರೆ. ಬಿಸಿಯೂಟದಿಂದ ನಗರ ಪ್ರದೇಶಗಳ ಶಾಲೆಗಳಲ್ಲಿ ಎಷ್ಟು ಅನುಕೂಲಗಳಾಗಿದೆ ಎನ್ನುವುದನ್ನು ನಾನು ಪಕ್ಕಕ್ಕೆ ಇಟ್ಟು ನೋಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ಆಗಿರುವ ಅನುಕೂಲಗಳನ್ನು ನಾವಿಲ್ಲಿ ಪ್ರಾಧಾನವಾಗಿ ಕಾಣಬೇಕಾಗಿದೆ.
ಶಾಲೆಯಲ್ಲಿ ಇಂದು ಮಕ್ಕಳಿಗಾಗಿ ವಿದ್ಯಾಭ್ಯಾಸ ಮಾತ್ರವಲ್ಲ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್, ವಿದ್ಯಾರ್ಥಿ ವೇತನ, ಹಾಲು, ಮಾತ್ರೆ ಹೀಗೆ ಹಲವಾರು ಯೋಜನೆಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕೈಗೊಂಡಿದ್ದಾರೆ. ಬಿಸಿಯೂಟದಿಂದ ನಗರ ಪ್ರದೇಶಗಳ ಶಾಲೆಗಳಲ್ಲಿ ಎಷ್ಟು ಅನುಕೂಲಗಳಾಗಿದೆ ಎನ್ನುವುದನ್ನು ನಾನು ಪಕ್ಕಕ್ಕೆ ಇಟ್ಟು ನೋಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ಆಗಿರುವ ಅನುಕೂಲಗಳನ್ನು ನಾವಿಲ್ಲಿ ಪ್ರಾಧಾನವಾಗಿ ಕಾಣಬೇಕಾಗಿದೆ.
ಬರಗಾಲ, ಮುಂಗಾರು ಮಳೆಯ ಕೊರತೆ, ಬೆಲೆ ಏರಿಕೆ ಮನುಷ್ಯನನ್ನು ಸಹ್ಜವಾಗಿ ಬದುಕನ್ನು ನಡೆಸಲಿಕ್ಕಾಗಿ ಅರಸುತ್ತಾ ಸಾಗಬೇಕಾಗಿದೆ. ಬದುಕಿಗಾಗಿ ಗೂಳೇ ಹೋಗಲೇ ಬೇಕಾದ ಅನಿವಾರ್ಯ ಸ್ಥಿತಿ ನಮ್ಮ ಹಳ್ಳಿಗರಿಗೆ ಇದೆ. ತಮ್ಮ ಮಕ್ಕಳ ಭವಿಷ್ಯದ ಚಿಂತನೆಯು ಇಲ್ಲಿ ಸೇರಿದೆ. ಆದರೆ ನಮ್ಮ ಎಲ್ಲ ಸೌಕರ್ಯದ ನಡುವೆ ನಮ್ಮ ಮಕ್ಕಳ ಮೇಲೆ ನಮಗಿರುವ ಕಾಳಜಿ ಏನು ? ಎಂದು ಆಲೋಚಿಸಬೇಕು. ಅತ್ಯಾಚಾರದಂಥಹ ಸುದ್ದಿಗಳು ಎಲ್ಲರಲ್ಲೂ ಭಯವನ್ನು ಹುಟ್ಟಿ ಹಾಕುತ್ತಿವೆ. ಮಾಧ್ಯಮಗಳ ತೀವ್ರತೆಯು ಮಕ್ಕಳ ಮನಸ್ಸನ್ನು ಘಾಸಿ ಮಾಡುವ ಬದಲು ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಿದೆ. ಮಗುವಿಗೆ ಇಂದು ಹಸಿವು ಇದೆ. ಅದು ಒಂದೊಪ್ಪತ್ತಿನದಾಗಿರಬಹುದು, ಕಲಿಕೆಯದಾಗಿರಬಹುದು ಆದರೆ ಅವನ/ಳ ಹಸಿವನ್ನು ನೀಗಿಸುವಂಥ, ಅವರ ಮನಸ್ಸನ್ನು ಅರಳಿಸುವಂಥ ಕಾರ್ಯಗಳನ್ನು ನಮ್ಮ ಅಧಿಕಾರಿಗಳು, ಶಿಕ್ಷಕರು ಹಾಗೂ ಪಾಲಕರು ಮಾಡಬೇಕಾಗಿದೆ. ಮಕ್ಕಳ ಇಂದಿನ ಈ ಹಸಿವುಗಳನ್ನು ಇಂಗಿಸುವ, ದೂರದಲ್ಲಿ ನಿಂತು ಇದೇ ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ತಂದೆ-ತಾಯಿಗಳಿಗೆ ಮಗನ ಶ್ರೇಯಸ್ಸನ್ನು ಕೇಳಿ ತಮ್ಮ ನೋವನ್ನು ಮರೆಯುವಂಥ ವಾತವರಣವನ್ನು ನಾವು ಕಟ್ಟಬೇಕಾಗಿದೆ. ಕಳೆದ ಸಾಲಿನಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ತನ್ನ ಬಿಡುವಿನ ವೇಳೆಯಲ್ಲಿ ಕೂಲಿ ಮಾಡಿಕೊಂಡು ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಹಣವನ್ನು ಸಂಗ್ರಹಿಸುತ್ತಿದ್ದ. ಹಾಗೆಯೇ ಅವನು ಇಡೀ ಶಾಲೆಗೆ ಹೆಚ್ಚಿನ ಅಂಕ ಪಡೆದು ಮೊದಲಿಗನಾದ. ನಮ್ಮ ಶಾಲೆಯ ಕನ್ನಡ ಅಧ್ಯಾಪಕರು ಅವನ ಓದುವಿಗೆ ಹಣದ ರೂಪದಲ್ಲಿ ಸಹಾಯ ಮಾಡಿದರು. ನಾನು ಕೆಲವು ಸಂಘ-ಸಂಸ್ಥೆಗಳೊಂದಿಗೆ ಮಾತನಾಡಿ ಅವನ ನೆರವಿಗೆ ಹಣದ ಹಾಗೂ ಪುಸ್ತಕದ ರೂಪದಲ್ಲಿ ಸಹಾಯ ಮಾಡಿದ್ದು ಇದೆ. ಒಂದೊಪ್ಪತ್ತಿನ ಊಟ ಅವನನ್ನು ಬಲಿ ತೆಗೆದುಕೊಳ್ಳದಿರಲಿ. ಈ ಊಟ ಕೇವಲ ಊಟವಾಗದೇ ಭವಿಷ್ಯತನ್ನು ರೂಪಿಸುವ ದಾರಿಯಾಗಲಿ.
Friday, August 15, 2014
ಆರು ಕೊಂಬಿನ ಆನೆ
ಬೋದಿಸತ್ವನು ಒಂದು ಸಲ ವಾರಾಣಸಿಯ ರಾಜನ ಮಂತ್ರಿಗೆ ಮಗನಾಗಿ ಹುಟ್ಟಿದನು. ಚಿಕ್ಕಂದಿನಿಂದಲೇ ಅವನು ಬುದ್ದಿಶಾಲಿಯಾದ್ದರಿಂದ ಅವನಿಗೆ ಮೇದಾವಿ ಎಂದು ಹೆಸರಿಟ್ಟರು. ತಂದೆ ಕಾಲವಾದ ಮೇಲೆ ತನ್ನ ತಂದೆಯ ಸ್ಥಾನಕ್ಕೆ ಮೇದಾವಿ ಮಂತ್ರಿಯಾದ.
ವಾರಾಣಾಸಿಯ ರಾಜನ ಅರಮನೆಯಲ್ಲಿ ಒಂದು ಪಟ್ಟದ ಆನೆ ಇತ್ತು. ಅದಕ್ಕೆ ಪ್ರತಿದಿವಸವು ದೊಡ್ಡ ದೊಡ್ಡ ಅನ್ನದ ಮುದ್ದೆಗಳನ್ನು ತಿನ್ನಿಸುತ್ತಿದ್ದರು. ರಾಜನಿಗೆ ತನ್ನ ಪಟ್ಟದ ಆನೆಯನ್ನು ಕಂಡರೆ ತುಂಭಾ ಸಂತೋಷವಾಗುತ್ತಿತ್ತು. ಬಿಡುವಾದಾಗ ದೊರೆ ತಾನೆ ಬಂದು ತನ್ನ ಕೈಯಾರೆ ಆನೆಗೆ ಅನ್ನದ ಮುದ್ದೆಗಳನ್ನು ತಿನ್ನಿಸುತ್ತಿದ್ದ. ಆನೆ ನಾಯಿಯನ್ನು ಕರೆದು ಪ್ರೀತಿಯಿಂದ ಒಂದು ಮುದ್ದೆ ಅನ್ನವನ್ನು ಹಾಕಿತು. ನಾಯಿ ತನ್ನ ಜನುಮದಲ್ಲಿ ಎಂದು ಸೊಗಸಾದ ಅನ್ನ ತಿಂದಿರಲ್ಲಿಲ್ಲ ಆನೆಯನ್ನು ಕಂಡು ಅದಕ್ಕೆ ಹೆದರಿಕೆ ಇದ್ದರು, ಅನ್ನದ ಮೇಲಿನ ಆಸೆಯಿಂದ ಮುಂದೆ ಬಂದು ಇಡಿಯ ಮುದ್ದೆಯಲ್ಲಿ ಒಂದು ಅಗಳು ಬಿಡದೆ ಹಾಗೇ ತಿಂದು ಬಿಟ್ಟಿತು. ನಾಯಿ ಅನ್ನ ತಿನ್ನುವಾಗ ಆನೆ ಪ್ರೀತಿಯಿಂದ ಅದರ ಬೆನ್ನನ್ನು ಸವರುತ್ತಿತ್ತು.
Saturday, July 26, 2014
Saturday, July 5, 2014
ಡೊಳ್ಳು ಕುಣಿತದ ಪ್ರತ್ಯಾಕ್ಷಿಕೆ
| ಡೊಳ್ಳು ಬಾರಿಸುವುದರಲ್ಲಿ ಮಕ್ಕಳು |
ಮೂಡಲಕೊಪ್ಪಲು ಸರಕಾರೀ ಪ್ರೌಢಶಾಲೆ ಯಲ್ಲಿ ದಿನಾಂಕ ೦೪. ೦೭. ೨೦೧೪ ರ ಶುಕ್ರವಾರ ರಂಗ - ಪಠ್ಯ - ಪ್ರದರ್ಶನ ಯೋಜನೆಯ ಅಡಿಯಲ್ಲಿ ಡೊಳ್ಳು ಕುಣಿತದ ಪ್ರತ್ಯಾಕ್ಷಿಕೆಯನ್ನು ನೆಡೆಸಲಾಯಿತು. ಮಕ್ಕಳ ಪಠ್ಯವನ್ನು ರಂಗಕ್ಕೆ ತರುವ ಪ್ರಯತ್ನದಲ್ಲಿರುವ ನಾಟಕ ಶಿಕ್ಷಕಿಯಾದ ಶ್ರೀಮತಿ ಶಾಂತಮಣಿ ಯವರು ಸ್ಥಳೀಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ ಶಿಕ್ಷಕರು ಬೋಧನೆಯೊಂದಿಗೆ ಪ್ರಾಯೋಗಿಕವಾಗಿ ವಿವಿಧ ಪ್ರಕಾರಗಳನ್ನು ಪರಿಚಯಿಸುವುದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಯಪಡಿಸುತ್ತಾ ತಾವು ನಡೆಸುತ್ತಿರುವ ಯೋಜನೆಯ ಭಾಗವಾಗಿ ಸ್ಥಳೀಯ ಪ್ರಕಾರಗಳನ್ನು ಅವಲೋಕಿಸುವುದರ ಜೊತೆಗೆ ಮಕ್ಕಳು ಅಭ್ಯಾಸ ಮಾಡಬೇಕು ಎಂಬ ಇಚ್ಚೆಯನ್ನು ವ್ಯಕ್ತಪಡಿಸಿದರು.
| ಶಿಕ್ಷಕಿ ಡೊಳ್ಳು ಬಾರಿಸುತ್ತಿರುವುದು. |
| ನಾಟಕ ಶಿಕ್ಷಕಿ ಶಾಂತಮಣಿ |
ಹತ್ತಿರದ ಜಕ್ಕನಹಳ್ಳಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೂಡಲಕೊಪ್ಪಲು ಪ್ರೌಢಶಾಲೆಯಲ್ಲಿ ಶುಕ್ರುವಾರ ಮಧ್ಯಾಹ್ನ ೩. ೦೦ ಗಂಟೆಗೆ ಡೊಳ್ಳು ಕುಣಿತವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದರು. ಜೊತೆಗೆ ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕೋಲಾಟವನ್ನು ಪ್ರದರ್ಶಿಸಿದರು. ಡೊಳ್ಳು ಕುಣಿತದ ಪ್ರದರ್ಶನವನ್ನು ವೀಕ್ಷಿಸುತ್ತಾ ಭಾವುಕರಾದ ಶಿಕ್ಷಕರು ತಾವು ಡೊಳ್ಳನ್ನು ಬಾರಿಸಿ ಆನಂದ ಪಟ್ಟರು. ಜಕ್ಕನಹಳ್ಳಿ ಶಾಲೆಯಿಂದ ವಿದ್ಯಾರ್ಥಿಗಳನ್ನು ಶಿಕ್ಷಕರಾದ ಲಿಂಗರಾಜು ಅವರು ಕರೆದುಕೊಂಡು ಬಂದಿದ್ದರು.
ಸ್ಥಳಿಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಮುಂದೆ ಇವುಗಳನ್ನು
ಉಳಿಸಿಕೊಂಡು ಹೋಗಬೇಕಾಗಿರುವುದರ ಕುರಿತು ತಿಳಿಸುತ್ತಾ ಪ್ರತಿ ಪ್ರೌಢಶಾಲೆಗಳಲ್ಲಿ ಇಂಥಹ
ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದು ನಾಟಕ ಶಿಕ್ಷಕಿ ಶಾಂತಮಣಿಯವರು ತಿಳಿಸಿದರು. ಕಾರ್ಯಕ್ರಮದಲ್ಲಿ
ಮುಖ್ಯೋಪಾಧ್ಯಾಯರಾದ ಶ್ರೀಮತಿ ರಹತ್ ಜಾನ್ , ಶ್ರೀ ಬೋರೆಗೌಡ, ಶ್ರೀ ಮರಿಸ್ವಾಮಿಗೌಡ,
ಶ್ರೀ ಲೋಕೇಶ್, ಶ್ರೀಮತಿ ಪವಿತ್ರ, ಶ್ರೀ ನಿತೀಶ್ ಹಾಗೂ ಶ್ರೀರಮೇಶ್ ಅವರು
ಭಾಗವಹಿಸಿದ್ದರು.
Subscribe to:
Posts (Atom)

















