Saturday, July 26, 2014
Saturday, July 5, 2014
ಡೊಳ್ಳು ಕುಣಿತದ ಪ್ರತ್ಯಾಕ್ಷಿಕೆ
| ಡೊಳ್ಳು ಬಾರಿಸುವುದರಲ್ಲಿ ಮಕ್ಕಳು |
ಮೂಡಲಕೊಪ್ಪಲು ಸರಕಾರೀ ಪ್ರೌಢಶಾಲೆ ಯಲ್ಲಿ ದಿನಾಂಕ ೦೪. ೦೭. ೨೦೧೪ ರ ಶುಕ್ರವಾರ ರಂಗ - ಪಠ್ಯ - ಪ್ರದರ್ಶನ ಯೋಜನೆಯ ಅಡಿಯಲ್ಲಿ ಡೊಳ್ಳು ಕುಣಿತದ ಪ್ರತ್ಯಾಕ್ಷಿಕೆಯನ್ನು ನೆಡೆಸಲಾಯಿತು. ಮಕ್ಕಳ ಪಠ್ಯವನ್ನು ರಂಗಕ್ಕೆ ತರುವ ಪ್ರಯತ್ನದಲ್ಲಿರುವ ನಾಟಕ ಶಿಕ್ಷಕಿಯಾದ ಶ್ರೀಮತಿ ಶಾಂತಮಣಿ ಯವರು ಸ್ಥಳೀಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ ಶಿಕ್ಷಕರು ಬೋಧನೆಯೊಂದಿಗೆ ಪ್ರಾಯೋಗಿಕವಾಗಿ ವಿವಿಧ ಪ್ರಕಾರಗಳನ್ನು ಪರಿಚಯಿಸುವುದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಯಪಡಿಸುತ್ತಾ ತಾವು ನಡೆಸುತ್ತಿರುವ ಯೋಜನೆಯ ಭಾಗವಾಗಿ ಸ್ಥಳೀಯ ಪ್ರಕಾರಗಳನ್ನು ಅವಲೋಕಿಸುವುದರ ಜೊತೆಗೆ ಮಕ್ಕಳು ಅಭ್ಯಾಸ ಮಾಡಬೇಕು ಎಂಬ ಇಚ್ಚೆಯನ್ನು ವ್ಯಕ್ತಪಡಿಸಿದರು.
| ಶಿಕ್ಷಕಿ ಡೊಳ್ಳು ಬಾರಿಸುತ್ತಿರುವುದು. |
| ನಾಟಕ ಶಿಕ್ಷಕಿ ಶಾಂತಮಣಿ |
ಹತ್ತಿರದ ಜಕ್ಕನಹಳ್ಳಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೂಡಲಕೊಪ್ಪಲು ಪ್ರೌಢಶಾಲೆಯಲ್ಲಿ ಶುಕ್ರುವಾರ ಮಧ್ಯಾಹ್ನ ೩. ೦೦ ಗಂಟೆಗೆ ಡೊಳ್ಳು ಕುಣಿತವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದರು. ಜೊತೆಗೆ ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕೋಲಾಟವನ್ನು ಪ್ರದರ್ಶಿಸಿದರು. ಡೊಳ್ಳು ಕುಣಿತದ ಪ್ರದರ್ಶನವನ್ನು ವೀಕ್ಷಿಸುತ್ತಾ ಭಾವುಕರಾದ ಶಿಕ್ಷಕರು ತಾವು ಡೊಳ್ಳನ್ನು ಬಾರಿಸಿ ಆನಂದ ಪಟ್ಟರು. ಜಕ್ಕನಹಳ್ಳಿ ಶಾಲೆಯಿಂದ ವಿದ್ಯಾರ್ಥಿಗಳನ್ನು ಶಿಕ್ಷಕರಾದ ಲಿಂಗರಾಜು ಅವರು ಕರೆದುಕೊಂಡು ಬಂದಿದ್ದರು.
ಸ್ಥಳಿಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಮುಂದೆ ಇವುಗಳನ್ನು
ಉಳಿಸಿಕೊಂಡು ಹೋಗಬೇಕಾಗಿರುವುದರ ಕುರಿತು ತಿಳಿಸುತ್ತಾ ಪ್ರತಿ ಪ್ರೌಢಶಾಲೆಗಳಲ್ಲಿ ಇಂಥಹ
ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದು ನಾಟಕ ಶಿಕ್ಷಕಿ ಶಾಂತಮಣಿಯವರು ತಿಳಿಸಿದರು. ಕಾರ್ಯಕ್ರಮದಲ್ಲಿ
ಮುಖ್ಯೋಪಾಧ್ಯಾಯರಾದ ಶ್ರೀಮತಿ ರಹತ್ ಜಾನ್ , ಶ್ರೀ ಬೋರೆಗೌಡ, ಶ್ರೀ ಮರಿಸ್ವಾಮಿಗೌಡ,
ಶ್ರೀ ಲೋಕೇಶ್, ಶ್ರೀಮತಿ ಪವಿತ್ರ, ಶ್ರೀ ನಿತೀಶ್ ಹಾಗೂ ಶ್ರೀರಮೇಶ್ ಅವರು
ಭಾಗವಹಿಸಿದ್ದರು.
Monday, June 16, 2014
Sunday, May 18, 2014
ಅತಿ ಆಸೆ ಗತಿ ಗೇಡು
ಒಂದು ಊರಿನಲ್ಲಿ ಒಬ್ಬ ಬಡವ ಇದ್ದ. ಅವನು ದೇವರಲ್ಲಿ ನನಗೆ ಒಂದು ಚಿನ್ನದ ಕೋಳಿಯನ್ನು ಕೊಡು ಎಂದು ಮೊರೆಯಿಟ್ಟ . ದೆವರು ಅವನ ಇಷ್ಟದಂತೆಯೆ ಅವನಿಗೆ ಕೋಳೀಯನ್ನು ಕೊಟ್ಟಿತು.ಹೀಗೆ ಹಲವು ದಿನಗಳು ಕಳೆದವು. ಬಡವನ ಆಸೆಯಂತೆ ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು .ಬಡವ ಪ್ರತಿ ದಿನ ನಾನು ಮೊಟ್ಟೆಯನ್ನು ತೆಗೆಯಬೆಕಲ್ಲ ಎಂದು ಯೋಚಿಸಿ ಆತೀಯಾದ ಆಸೆಯಿಂದ ಕೋಳಿಯನ್ನೆ ಕುಯ್ದುಬಿಟ್ಟ .
Saturday, February 22, 2014
Friday, February 21, 2014
ಉದ್ಘಾಟನೆ
ರಂಗ-ಪಠ್ಯ-ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮುಖ್ಯೋಪಾಧ್ಯಯರು, ಹಿರಿಯ ಶಿಕ್ಷಕರಾದ ಬೋರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಮಲ್ಲೇಶ್, ಲೋಕೇಶ್ ಹಾಗೂ ಯೋಜನೆಯ ಸಂಚಾಲಕಿಯಾದ ಶ್ರೀಮತಿ ಶಾಂತಮಣಿ ಚಿತ್ರದಲ್ಲಿದ್ದಾರೆ.
| ಮರಿಸ್ವಾಮಿಗೌಡ |
| ಎಸ್.ಡಿ.ಎಮ್.ಸಿ ಅಧ್ಯಕ್ಷರಿಂದ ಉದ್ಗಾಟನೆ |
| ಕನ್ನಡ ಶಿಕ್ಷಕಿಯಿಂದ ಕಾವ್ಯ ವಾಚನ |
| ಅಧ್ಯಕ್ಷರ ನುಡಿ |
| ಸಂಚಾಲಕಿ ಶ್ರೀಮತಿ ಶಾಂತಮಣಿ |
Thursday, February 20, 2014
ರಂಗ - ಪಠ್ಯ - ಪ್ರದರ್ಶನ
ರಂಗ - ಪಠ್ಯ - ಪ್ರದರ್ಶನ ದ ಯೋಜನೆಯನ್ನು ನಮ್ಮ ಪ್ರೌಢಶಾಲೆಯಲ್ಲಿ ಕಲಿ-ಕಲಿಸು ವಿನ ಅಡಿಯಲ್ಲಿ ನಡೆಸುತಲಿದ್ದು ಇದರ ಎಲ್ಲ ಸಹಕಾರವನ್ನು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ - ಬೆಂಗಳೂರು, ಸರ್ವ ಶಿಕ್ಷಣ ಅಭಿಯಾನ - ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ - ಪಾಂಡವಪುರ ದೊಂದಿಗೆ ನಮ್ಮ ಪ್ರೌಢಶಾಲೆ, ಮೂಡಲುಕೊಪ್ಪಲಿನ ಶಿಕ್ಷಕ ವೃಂದ, ಜನತೆಯ ಸಂಪೂರ್ಣ ಸಹಕಾರ ನಮ್ಮ ಈ ಯೋಜನಿಗಿದೆ.
Wednesday, October 30, 2013
ತೆಂಗಿನ ಮರ
£Á£ÀÄ vÉAV£À ªÀÄgÀ. £Á£ÀÄ zÀtÂzÀÄ §AzÀªÀjUÉ ¹»
¤ÃgÀ£ÀÄß PÉÆqÀÄvÉÛãÉ. ¨sÀPÀë÷å
¨ÉÆÃd£ÀªÀ£ÀÄß ªÀiÁqÀ®Ä £Á£ÀÄ ¨ÉÃPÀÄ. PÉÆ§j JuÉÚ vÀAiÀiÁj¸À®Ä ªÀÄvÀÄÛ zÉêÀ¸ÁÛ£ÀPÉÌ ¥ÀÇeÉ ªÀiÁqÀ®Ä, ªÀÄ£ÉUÀ½UÉ
QlQ, ¨ÁV®Ä ªÀiÁqÀ®Ä £Á£ÀÄ ¨ÉÃPÀÄ. £À£Àß
PÁ¬ÄAiÀÄ£ÀÄß HjAzÀ HjUÉ PÀ¼ÀÄ»¸ÀÄvÁÛgÉ. £À£Àß §½ C½®Ä §AzÀÄ ªÁ¸ÀªÀiÁqÀÄvÀÛzÉ.
¥ÀQëUÀ¼ÀÄ PÀÆqÀ £À£ÀßeÉÆvÉ EgÀÄvÀÛªÉ. £Á¤®èzÉ Hl AiÀiÁjUÀÆ gÀÄa¸ÀĪÀÅ¢®è.
gÀQëvï.ºÉZï.Dgï
QgÀt±ÉnÖ
8
£ÉÃvÀgÀUÀw
ಭಾರತದ ಜಾನಪದ ಕಥೆಗಳು
MAzÀÄ
HgÀÄ C°è UÀAqÀ ºÉAqÀw ¸ÀAvÉÆÃµÀ¢AzÀ EgÀÄvÀÛgÉ. EzÀÝ M§â ªÀÄUÀ£À ªÉÄ¯É CªÀjUÉ
vÀÄA¨sÀ ¦æÃwvÀAzÉ ªÀåªÀ¸ÁAiÀÄ, vÁ¬Ä ªÀÄ£ÉUÉ®¸ÀzÀ°èAiÉÄà PÁ® ¸ÀjzÀÄ ªÀÄUÀ£ÀÄ
ªÀÄzÀĪÉAiÀÄ ªÀAiÀĹìUÉ §gÀÄvÁÛ£É. ªÀÄUÀ¤UÉ ªÀÄzÀÄªÉ ªÀiÁqÀ®Ä UÀAqÀ-ºÉAqÀw
PÀ£ÁåAiÉÄ£ÀÄß ºÀÄqÀÄPÀÄwÛgÀÄvÁÛgÉ. EzÀÄ ªÀÄUÀ¤UÉ EµÀÖ«gÀ°®è. MAzÀÄ ¢£À
PÀ£À¹£À°è vÀªÀÄä ªÀÄ£ÉAiÀÄ zÉʪÀ PÀAqÁ ºÀÄqÀÄUÀ ªÀÄzÀĪÉUÉ M¦àUÉ ¤ÃqÀÄvÁÛ£É.
zÀA¥ÀwUÀ¼ÀÄ ¸ÀAvÉÆÃµÀ¢AzÀ zÀÆgÀzÀ Hj£ÀvÀÛ ªÀÄUÀ£À eÉÆvÉUÁwAiÀÄ£ÀÄß ºÀÄqÀÄPÀ®Ä
¸ÁUÀÄvÁÛgÉ. DAiÀiÁ¸À¢AzÀ ¸ÁUÀÄwÛzÀÝ HgÀ
MAzÀÄ ªÀÄ£ÉAiÀÄ ªÀÄÄA¢£À PÀmÉÖUÉ PÀĽvÀÄ zÀA¥ÀwUÀ¼ÀÄ
«±Àæ«Ä¹PÉÆ¼ÀÄîvÁÛgÉ.
Saturday, October 26, 2013
Rapidex English Book
ಒಬ್ಬ ವ್ಯಕ್ತಿಯು ಇಂಗ್ಲಿಷ್ ಭಾಷೆಯನ್ನೂ ಸುಲಭವಾಗಿ ಕಲಿಯಬಹುದು ಮತ್ತು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವ ಬಗ್ಗೆ ಮತ್ತು ವೆನ್, ವಾಟ್, ಹೂ, ವೇರ್ ಎಂಬ ಪದಗಳ ಬಳಕೆ ಕಾಲಗಳ ಸ್ತೂಲ ಪರಿಚಯವನ್ನು ಈ ಪುಸ್ತಕವು ತಿಳಿಸಿಕೊಟ್ಟಿದೆ.
ಹರ್ಷಿತ
೯ನೆ ತರಗತಿ
ಸ ಪ್ರೌ ಶಾಲೆ
ಮೂಡಲಕೊಪ್ಪಲು.
Friday, August 2, 2013
Sunday, December 16, 2012
Sunday, September 2, 2012
Saturday, July 7, 2012
ಚಂದ ಪದ್ಯ
ಮಕ್ಕಳ ರೈಲು ಬಂತು
ಚುಕ್ಕು ಚುಕ್ಕು ಚುಕ್ಕೂ
ಮರದಲ್ಲಿ ಹಕ್ಕಿಯೊಂದು
ಕುಕ್ಕು ಕುಕ್ಕು ಕುಕ್ಕೂ
ಕುರುಕು ತಿಂಡಿಯನ್ನು
ಮುಕ್ಕು ಮುಕ್ಕು ಮುಕ್ಕೂ
ಪರೀಕ್ಷೆಯಲ್ಲಿ ಉತ್ತರವ
ಕಕ್ಕು ಕಕ್ಕು ಕಕ್ಕೂ
ಜಾಡಿಯ ಉಪ್ಪಿನಕಾಯಿ
ನೆಕ್ಕು ನೆಕ್ಕು ನೆಕ್ಕೂ
ಬಾಯಿ ಖಾರವಾದರೆ
ಹುಕ್ಕು ಹುಕ್ಕು ಹುಕ್ಕೂ
ರಜೆಯಲ್ಲಿ ಪಠ್ಯಕ್ಕೆ
ತುಕ್ಕು ತುಕ್ಕು ತುಕ್ಕೂ
ಶಾಲೆ ಶುರುವಾದಾಗ
ಬಿಕ್ಕು ಬಿಕ್ಕು ಬಿಕ್ಕೂ
ದುಷ್ಟನಾ ಮೈತುಂಬಾ
ಸೊಕ್ಕು ಸೊಕ್ಕು ಸೊಕ್ಕೂ
ಆಳಿಗೊಂದು ಗುದ್ದನ್ನು
ಹಾಕು ಹಾಕು ಹಾಕೂ
ಅಜ್ಜಿಯ ಚರ್ಮವೆಲ್ಲಾ
ಸುಕ್ಕು ಸುಕ್ಕು ಸುಕ್ಕೂ
ಅಜ್ಜಿ ಕತೆ ಕೇಳಿ ಎಲ್ಲಾ
ನಕ್ಕು ನಕ್ಕು ನಕ್ಕೂ
ನಾಯಿಯು ಬೊಗಳುವುದು
ಬ್ಯಕ್ಕು ಬ್ಯಕ್ಕು ಬ್ಯಕ್ಕೂ
ಕುದುರೆಯು ಓಡುವುದು
ಟೊಕ್ಕು ಟೊಕ್ಕು ಟೊಕ್ಕೂ
ಮನೆಯಲ್ಲಿರಲಿ ನಾಯಿ ಜೊತೆ
ಬೆಕ್ಕು ಬೆಕ್ಕು ಬೆಕ್ಕೂ
ಜೊತೆಗಿಷ್ಟು ಹಕ್ಕಿಗಳು
ಬೇಕು ಬೇಕು ಬೇಕೂ
ಅಮ್ಮನ ಕೂದಲೆಲ್ಲಾ
ಸಿಕ್ಕು ಸಿಕ್ಕು ಸಿಕ್ಕೂ
ಅಪ್ಪನ ಬೂಟು ದನಿ
ಟಕ್ಕು ಟಕ್ಕು ಟಕ್ಕೂ
ಯಾವಾಗಲೂ ಮಿನುಗಬೇಕು
ಲಕ್ಕು ಲಕ್ಕು ಲಕ್ಕೂ
ಇಲ್ಲವಾದ್ರೆ ಮುಸ್ರೆ ಪಾತ್ರೆ
ತಿಕ್ಕು ತಿಕ್ಕು ತಿಕ್ಕೂ
ಓದಬೇಕು ರಾಶಿ ರಾಶಿ
ಬುಕ್ಕು ಬುಕ್ಕು ಬುಕ್ಕೂ
ಒಳ್ಳೆಯ ವಿಷಯವನ್ನೆ
ಹೆಕ್ಕು ಹೆಕ್ಕು ಹೆಕ್ಕೂ
ಪರೀಕ್ಷೆ ಬಂತಂದ್ರೆ
ಪುಕ್ಕು ಪುಕ್ಕು ಪುಕ್ಕೂ
ಮೇಷ್ಟರು ಕೊಡ್ತಾರೆ
ಕಿಕ್ಕು ಕಿಕ್ಕು ಕಿಕ್ಕೂ
ಮಕ್ಕಳ ಸಂಭ್ರಮದ
ಉಕ್ಕು ಉಕ್ಕು ಉಕ್ಕೂ
ನೋಡಲು ಚಂದ ಅದರ
ಲಕ್ಕು ಲಕ್ಕು ಲಕ್ಕೂ
ತೋರಬೇಕು ಮಕ್ಕಳಿಗೊಳ್ಳೆ
ದಿಕ್ಕು ದಿಕ್ಕು ದಿಕ್ಕೂ
ದಕ್ಕಬೇಕು ಮಕ್ಕಳಿಗವರ
ಹಕ್ಕು ಹಕ್ಕು ಹಕ್ಕು
ಮುದ್ದು ತೀರ್ಥಹಳ್ಳಿ
( ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟ )
Monday, July 2, 2012
ಗೋವಿಂದ ಪೈ ಅವರ ಕವಿತೆ: ನವೋದಯ ಚೌಕಟ್ಟಿನಲ್ಲಿ
ಹೊಸಗನ್ನಡದ ಕಿರಣೋದಯಕ್ಕೆ ತಮ್ಮ ವ್ಯಕ್ತಿತ್ವದ ಪ್ರಭೆಯನ್ನು ಸೇರಿಸಿದ ಹಲವು ಹಿರಿಯ ಸಾಹಿತಿಗಳಲ್ಲಿ ಗೋವಿಂದ ಪೈ ಅವರೂ ಒಬ್ಬರು. ಕನ್ನಡ ಕಾವ್ಯ ಸ್ಥಗಿತಗೊಂಡು ಆಗಲೇ ಮೂರು ದಶಕಗಳಾಗಿದ್ದ ಅಂದಿನ ಪರಿಸರದಲ್ಲಿ, ಅದಕ್ಕೆ ಹೊಸ ನೀರನ್ನು ನುಗ್ಗಿಸಿ,ಹೊಸ ಕಾಲುವೆಗಳನ್ನು ತೋಡಿ, ಹೊಸ ಹಸಿರನ್ನು ಬೆಳೆಯಲು ಶ್ರಮಿಸಿದವರಲ್ಲಿ ಪೈ ಅವರು ಮುಖ್ಯರಾದವರು. ಅಂದಿನ ಸಾಹಿತ್ಯಕ್ಕೆ ಚಲನಶೀಲತೆಯನ್ನು ತರುವ ಹೊಸರೂಪಗಳ ಹುಡುಕಾಟ ನಡೆದದ್ದು, ಮಂಗಳೂರು, ಮೈಸೂರು ಮತ್ತು ಧಾರವಾಡದ ಪರಿಸರಗಳಲ್ಲಿ.ಮಂಗಳೂರಿನ ಪರಿಸರದಲ್ಲಿ ಇನ್ನೂ ಹಲವರ ಜತೆ, ತಮ್ಮ ಸಂಶೋಧನೆ ಹಾಗೂ ಬರೆಹಗಳ ಮೂಲಕ, ಹೊಸ ರೂಪಗಳನ್ನು ಕನ್ನಡ ಸಾಹಿತ್ಯಕ್ಕೆ ತಂದವರು ಪೈ ಅವರು ಸಾಹಿತ್ಯ ಸಂಶೋಧನೆ ಮತ್ತು ಕಾವ್ಯ ಈ ಎರಡೂ ಅವರು ಕೆಲಸ ಮಾಡಿದ ಪ್ರಮುಖ ಕ್ಷೇತ್ರಗಳು. ಕನ್ನಡ ಸಂಶೋಧನೆಯ ಶಿಲಾತಲದಿಂದ ಅವರು ತೆಗೆದ ಎಷ್ಟೋ ಸಂಗತಿಗಳು, ಮುಂದಿನವರ ಚಿಂತನೆಯ ನೆಲೆಗಟ್ಟುಗಳಾಗಿವೆ.
ಗೋವಿಂದ ಪೈ ಮೊದಲು ತಮ್ಮ ಕವಿತೆಯನ್ನು ಪ್ರಕಟಿಸಿದ್ದು ೧೯೦೦ರಲ್ಲಿ; ಆನಂತರ ಆರು ದಶಕಗಳವರೆಗೆ ಸಾಗಿತು ಅವರ ಸಾಹಿತ್ಯ ನಿರ್ಮಿತಿ. ಪೈ ಅವರು ಸಾಹಿತ್ಯ ನಿರ್ಮಿತಿಗೆ ತೊಡಗಿದ ಕಾಲವನ್ನು ಇಂದು ನಾವು ‘ನವೋದಯ’ ಎಂದು ಗುರುತಿಸುತ್ತೇವೆ, ಮತ್ತು ಕಾವ್ಯದ ಮಟ್ಟಿಗೆ ಅವರನ್ನು ನವೋದಯ ಪರಂಪರೆಗೆ ಸೇರಿದವರು ಎಂದು ಪರಿಗಣಿಸುತ್ತೇವೆ. ಇಂದು ಯಾವುವನ್ನು ‘ನವೋದಯ ಸಾಹಿತ್ಯದ ಲಕ್ಷಣಗಳು’ ಎಂದು ಗುರುತಿಸುತ್ತೇವೆಯೋ, ಅವು ಪೈ ಅವರ ಕಾವ್ಯದಲ್ಲಿ ಸಮೃದ್ಧವಾಗಿ ಕಾಣಿಸಿಕೊಳ್ಲುತ್ತವೆ. ಈ ದೃಷ್ಟಿಯಿಂದ ಪೈ ಅವರ ಕಾವ್ಯ ನವೋದಯದ ಚೌಕಟ್ಟಿನೊಳಗಣದು. ನವೋದಯ ಕಾವ್ಯದ ಈ ಹಾದಿಯಲ್ಲಿ, ಕನ್ನಡ ಕಾವ್ಯ ಪ್ರಕಾರಗಳ ದೃಷ್ಟಿಯಿಂದ ಮತ್ತು ಪ್ರಯೋಗಗಳ ದೃಷ್ಟಿಯಿಂದ ಹಲವು ‘ಮೊದಲು’ಗಳನ್ನು ತೆರೆದವರು ಅವರು
from: kanaja
Monday, June 11, 2012
Subscribe to:
Posts (Atom)








.jpg)








